ಪೋಸ್ಟ್‌ಗಳು

ಜನವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅವಳು ಅವನಾದಾಗ

                     ಶೀರ್ಷಿಕೆಯ ಪದಶಃ (ವಾಚ್ಯಾರ್ಥ) ಅರ್ಥವನ್ನಷ್ಟೇ ಅಲ್ಲದೆ ಅದರ ಧ್ವನ್ಯಾರ್ಥ (ಭಾವಾರ್ಥ)  ವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಈ ಹೇಳಿಕೆಯು ಹತ್ತು ಹಲವು ಆಯಾಮಗಳಲ್ಲಿ ತನ್ನ ವ್ಯಾಪಕತೆಯನ್ನು ಹರಡಿಕೊಳ್ಳುತ್ತಾ ತನ್ನ ಸತ್ಯಾರ್ಥವನ್ನು ಸಾರುತ್ತಾ ಸಾಗುತ್ತದೆ. ಅವಳು ಅವನಾದರೂ ಅವಳೀಗ ತಾಯಿ   ಈ ಹೇಳಿಕೆಯನ್ನು ದೈಹಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ವೈಜ್ಞಾನಿಕವಾಗಿ ಹೀಗೆ ಯಾವುದೇ ಆಯಾಮದಿಂದ ನೋಡಿದರೂ ಇದು ಸತ್ಯ ಎನ್ನುವುದು ಶೃತವಾಗುತ್ತದೆ.           ಇದಕ್ಕೆ ಪುರಾವೆಗಳನ್ನು ಹುಡುಕುತ್ತಾ ಹಿಂದೆ ಸಾಗಿದರೆ ಪುರಾಣಗಳಲ್ಲಿಯೂ ಸಾಕ್ಷ್ಯಗಳು ದೊರೆಯುತ್ತವೆ. ಮಾರ್ಕಂಡೇಯ ಪುರಾಣದ ೧೦೮ನೇ ಅಧ್ಯಾಯದ ಒಂದು ಕಥೆಯಲ್ಲಿ ಮನುವು ಗುರು ವಶಿಷ್ಠರ ಸಲಹೆಯ ಮೇರೆಗೆ ಪುತ್ರ ಫಲಕ್ಕಾಗಿ ಯಜ್ಞವೊಂದನ್ನು ಮಾಡುತ್ತಾನೆ. ಆದರೆ ಯಜ್ಞದ ಫಲವಾಗಿ ಇಲಾ ಎನ್ನುವ ಹೆಣ್ಣು ಮಗುವಿನ ಜನನವಾಗುತ್ತದೆ. ಮಿತ್ರನಾದ ವರುಣ ದೇವರನ್ನು ಸ್ತುತಿಸಿ ಆ ಹೆಣ್ಣು ಮಗುವು ಗಂಡಾಗಿ ಪರಿವರ್ತಿತ ವಾಗುವಂತೆ ವರವನ್ನು ಬೇಡುತ್ತಾನೆ. ವರುಣ ದೇವನ ವರದ ಫಲವಾಗಿ ಇಲಾ ಸುದ್ಯಮ್ನ ಎಂಬ ಪುತ್ರನಾಗಿ ಪರಿವರ್ತಿತನಾಗುತ್ತಾನೆ. ಹರೆಯಕ್ಕೆ ಬಂದ ಸುದ್ಯುಮ್ನ ಶಿವನ ಶಾಪದಿಂದಾಗಿ ಮತ್ತೆ ಹೆಣ...

ಸಂಬಂಧ ಸಂಘರ್ಷ ಜೀವನ

         "ಸಂಬಂಧ - ಸಂಘರ್ಷ - ಜೀವನ"    ನಾವು  ಯಾವಾಗ ಉದ್ದೇಶ ಇರಿಸಿಕೊಂಡು ಒಂದು ಸಂಬಂದ ಬೆಳೆಸಿಕೊಳ್ಳುತ್ತೇವೋ ಆ ಉದ್ದೇಶಗಳು ಈಡೇರದಿದ್ದಾಗ ಸಂಬಂಧಗಳಲ್ಲಿ ಘರ್ಷಣೆ ಆರಂಭವಾಗುತ್ತದೆ. ಇದು ಮದುವೆ, ಗೆಳೆತನ, ವ್ಯಾಪಾರ ಎಲ್ಲಾ ವಿಷಯಗಳಿಗೂ ಅನ್ವಯವಾಗುತ್ತದೆ. ಹೆಂಡತಿಯ ದುಡಿಮೆಯ ಮೇಲಿನ ಆಸೆಯಿಂದ ಮದುವೆಯಾದ ಪುರುಷ ಯಾವಾಗ ಹೆಂಡತಿ ತನ್ನ ದುಡಿಮೆಯ ಮೇಲಿನ ಸ್ವಾಮ್ಯವನ್ನು ಬಿಟ್ಟುಕೊಡುವುದಿಲ್ಲವೋ ಆಗ ಬೇರೆ ಬೇರೆ ಕಾರಣಗಳನ್ನು ಹುಡುಕಿಕೊಂಡು ಅವಳೊಂದಿಗೆ ಘರ್ಷಣೆಗೆ ಇಳಿಯುತ್ತಾನೆ. ಹಾಗೆಯೇ ಗಂಡನ ದುಡಿಮೆಯ ಮೇಲಿನ ಆಸೆಯಿಂದ ಮದುವೆಯಾದ ಸ್ತ್ರೀ ಅದು ತನಗೆ ದಕ್ಜದಿದ್ದಾಗ ಘರ್ಷಣೆ ಆರಂಭಿಸುತ್ತಾಳೆ. ದುಡಿಯುವ ಹೆಣ್ಣು ಅವಳ  ಬ್ಯಾಂಕ್ ಪಾಸ್ ಬುಕ್, ಎಟಿಎಂ ಕಾರ್ಡನ್ನು ಗಂಡನಿಗೆ ಸಮರ್ಪಿಸಿ "ನನ್ನ ಡುಡಿಮೆ ನಿಮ್ಮ ದುಡಿಮೆ ಬೇರೆ ಬೇರೆಯೇನ್ರಿ.....? ನಾನೂ ದುಡಿಯೋದು ನಮ್ಮ ಸಂಸಾರಕ್ಕೇ ತಾನೆ" ಎಂದು ಸಮರ್ಪಣಾ ಭಾವ ವ್ಯಕ್ತ ಪಡಿಸುತ್ತಾಳೋ ಆಗ ಗಂಡನಿಗೆ ಘರ್ಷಣೆಗೆ ಸಾವಿರ ಕಾರಣಗಳಿದ್ದರೂ ಹೆಂಡತಿಯ ಎಟಿಎಂ ಕಾರ್ಡ್ ಅದಕ್ಕೆ ಅವಕಾಶ ಕೊಡುವುದಿಲ್ಲ. ಹಾಗೆಯೇ ದುಡಿಯುವ ಗಂಡಸು ತನ್ನ ದುಡಿಮೆಯಿಂದ ಖರೀದಿಸಿದ ಸೈಟು, ಮನೆಯನ್ನು ಹೆಂಡತಿಯ ಹೆಸರಿಗೆ ರಿಜಿಸ್ಟರ್ ಮಾಡಿಸಿದರೆ ಆ ಮನೆಯಲ್ಲಿ ಹೆಂಡತಿ ಶಾಂತಮೂರ್ತಿ.        ಸಂತೃಪ್ತಿಗಾಗಿ ಹಾತೊರೆಯುವುದು ಪ್ರಕೃತಿ ಸಹಜ ಸ್ವ...